ಅಭಿಪ್ರಾಯ / ಸಲಹೆಗಳು

ಆಯೋಗದ ಅಧಿಕಾರಗಳು

(1) ಆಯೋಗವು, ಈ ಅಧಿನಿಯಮದ ಉದ್ದೇಶಗಳಿಗೆ ಯಾವುದೇ ವಿಷಯವನ್ನು ತನಿಖೆ ಮಾಡುವಾಗ ಮತ್ತು ನಿರ್ದಿಷ್ಟವಾಗಿ ಈ ಮುಂದಿನ ವಿಷಯಗಳ ಸಂಬಂಧದಲ್ಲಿ, ದಾವೆಯ ವಿಚಾರಣೆ ನಡೆಸುವ ಸಿವಿಲ್ ನ್ಯಾಯಾಲಯವು 1908ರ ಸಿವಿಲ್ ಪ್ರಕ್ರಿಯಾ ಸಂಹಿತೆಯಡಿ (1908ರ ಕೇಂದ್ರ ಅಧಿನಿಯಮ 5) ಹೊಂದಿರುವ ಎಲ್ಲ ಅಧಿಕಾರಗಳನ್ನೂ ಹೊಂದಿರತಕ್ಕದ್ದು, ಎಂದರೆ :

(ಎ) ಕರ್ನಾಟಕದ ಯಾವುದೇ ಭಾಗದಿಂದ ಯಾವೊಬ್ಬ ವ್ಯಕ್ತಿಯನ್ನು ಸಮನು ಮಾಡುವುದು ಮತ್ತು ಅವನ ಹಾಜರಾತಿಯನ್ನು ಅಗತ್ಯಪಡಿಸುವುದು ಮತ್ತು ಪ್ರಮಾಣ ಮಾಡಿಸುವ ಮೂಲಕ ಅವನನ್ನು ಪರೀಕ್ಷಿಸುವುದು:

(ಬಿ) ಯಾವುದೇ ದಾಸ್ತಾವೇಜನ್ನು ಕಂಡುಹಿಡಿಯುವಂತೆ ಮತ್ತು ಹಾಜರುಪಡಿಸುವಂತೆ ವಶ್ಯಪಡಿಸುವುದು:

(ಸಿ) ಅಪಿsದಾವಿತ್ತಿನ ಮೂಲಕ ಸಾಕ್ಷ್ಯವನ್ನು ಸ್ವೀಕರಿಸುವುದು:

(ಡಿ) ಯಾವುದೇ ನ್ಯಾಯಾಲಯ ಅಥವಾ ಸರ್ಕಾರಿ ಕಛೇರಿಯಿಂದ ಯಾವುದೇ ಸರ್ಕಾರಿ ದಾಖಲೆಯನ್ನು ಅಥವಾ ಅದರ ಪ್ರತಿಯನ್ನು ಒದಗಿಸುವಂತೆ ಅಗತ್ಯಪಡಿಸುವುದು.

(ಇ) ಸಾಕ್ಷಿಗಳು ಮತ್ತು ದಾಸ್ತಾವೇಜುಗಳ ವಿಚಾರಣೆಗಾಗಿ ಕಮಿಷನ್ನುಗಳನ್ನು ಹೊರಡಿಸುವುದು, ಮತ್ತು

(ಎಫ್) ನಿಯಮಿಸಬಹುದಾದಂಥ ಇತರ ಯಾವುದೇ ವಿಷಯ

ಆಯೋಗದ ಸಮಿತಿಗಳು :-

(1) ಆಯೋಗವು ಕಾಲಕಾಲಕ್ಕೆ ಕೈಗೊಳ್ಳಬಹುದಾದಂಥ ವಿಶೇಷ ವಿಷಯಗಳ ಬಗ್ಗೆ ವ್ಯವಹರಿಸುವುದಕ್ಕೆ ಅಗತ್ಯವಾಗಬಹುದಾದಂತಹ ಸಮಿತಿಗಳನ್ನು ನೇಮಕ ಮಾಡಬಹುದು.

(2) ಆಯೋಗವು, ಸರ್ಕಾರೇತರ ಸಂಸ್ಥೆಗಳ ಅದರಲ್ಲೂ ನಿರ್ದಿಷ್ಟವಾಗಿ ಯಾವುದೇ ಮಹಿಳಾ ಸಂಸ್ಥೆಗಳ ಪ್ರತಿನಿಧಿಗಳನ್ನೂ ಒಳಗೊಂಡಂತೆ ಆಯೋಗದ ಸದಸ್ಯರಲ್ಲದ ತಾನು ಸೂಕ್ತವೆಂದು ಭಾವಿಸಬಹುದಾದಷ್ಟು ಸಂಖ್ಯೆಯ ವ್ಯಕ್ತಿಗಳನ್ನು (1)ನೇ ಉಪ-ಪ್ರಕರಣದ ಮೇರೆಗೆ ನೇಮಕ ಮಾಡಲಾದ ಯಾವುದೇ ಸಮಿತಿಗಳಿಗೆ ಸದಸ್ಯರನ್ನಾಗಿ ಸಹ-ಆಯ್ಕೆ ಮಾಡಲು ಅಧಿಕಾರ ಹೊಂದಿರತಕ್ಕದ್ದು ಮತ್ತು ಹಾಗೆ ಸಹ ಆಯ್ಕೆಗೊಂಡ ವ್ಯಕ್ತಿಗಳು ಸಮಿತಿಯ ಸಭೆಗಳಿಗೆ ಹಾಜರಾಗಲು ಮತ್ತು ಸಭೆಗಳ ವ್ಯವಹಾರಗಳಲ್ಲಿ ಭಾಗವಹಿಸಲು ಅಧಿಕಾರ ಹೊಂದಿರತಕ್ಕದ್ದು. ಆದರೆ ಮತ ನೀಡುವ ಅಧಿಕಾರ ಹೊಂದಿರತಕ್ಕದ್ದಲ್ಲ.

(3) ಸಹ-ಆಯ್ಕೆಗೊಂಡ ವ್ಯಕ್ತಿಗಳು ಸಮಿತಿಯ ಸಭೆಗಳಿಗೆ ಹಾಜರಾಗಲು ನಿಯಮಿಸಬಹುದಾದಂಥ ಭತ್ಯೆಗಳನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.

ಇತ್ತೀಚಿನ ನವೀಕರಣ​ : 11-02-2021 04:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಮಹಿಳಾ ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080