ಅಭಿಪ್ರಾಯ / ಸಲಹೆಗಳು

ಪ್ರಕಾರ್ಯಗಳು ಮತ್ತು ಅಧಿಕಾರಗಳು

 

ಆಯೋಗದ ಪ್ರಕಾರ್ಯಗಳು :-

(1) ಆಯೋಗವು ಈ ಕೆಳಗಿನ ಎಲ್ಲ ಅಥವಾ ಯಾವುದೇ ಪ್ರಕಾರ್ಯವನ್ನು ನೆರವೇರಿಸತಕ್ಕದ್ದು ಎಂದರೆ :-

(ಎ) ಸಂವಿಧಾನ ಮತ್ತು ಇತರೆ ಕಾನೂನುಗಳಲ್ಲಿ ಮಹಿಳೆಯರಿಗಾಗಿ ಕಲ್ಪಸಲಾಗಿರುವ ರಕ್ಷಣೋಪಾಯ ಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ವಿಚಾರಣೆ ನಡೆಸುವುದು ಮತ್ತು ಪರಿಶೀಲಿಸುವುದು;

(ಬಿ) ಅಂಥ ರಕ್ಷಣೋಪಾಯಗಳ ಕಾರ್ಯ ರೀತಿಯ ಬಗ್ಗೆ ವರದಿಗಳನ್ನು ವಾರ್ಷಿಕವಾಗಿ ಮತ್ತು ಆಯೋಗವು ಸೂಕ್ತವೆಂದು ಪರಿಗಣಿಸಬಹುದಾದಂಥ ಇತರ ಸಮಯಗಳಲ್ಲಿ ಸರ್ಕಾರಕ್ಕೆ ಸಲ್ಲಿಸುವುದು;

(ಸಿ) ಅಂತಹ ವರದಿಗಳಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಸುಧಾರಿಸಲು ಸರ್ಕಾರವು ಅಂತಹ ರಕ್ಷಣೋಪಾಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಬಗ್ಗೆ ಶಿಫಾರಸುಗಳನ್ನು ಮಾಡುವುದು:

(ಡಿ) ಮಹಿಳೆಯರಿಗೆ ಸಂಬಂಧಪಡುವ ಸಂವಿಧಾನದ ಈಗಿರುವ ಉಪಬಂಧಗಳು ಮತ್ತು ಇತರ ಕಾನೂನು ಗಳನ್ನು ಕಾಲಕಾಲಕ್ಕೆ ಪುನ: ಪರಿಶೀಲಿಸುವುದು ಮತ್ತು ಅಂಥ ಶಾಸನಗಳಲ್ಲಿರುವ ಯಾವುದೇ ದೋಷ, ಸೂಚಿಸುವಂಥ ತಿದ್ದುಪಡಿಗಳನ್ನು ಮಾಡಲು ಶಿಫಾರಸುಗಳನ್ನು ಮಾಡುವುದು:

(ಇ) ಮಹಿಳೆಯರಿಗೆ ಸಂಬಂಧಪಡುವ ಸಂವಿಧಾನದ ಮತ್ತು ಇತರ ಕಾನೂನುಗಳ ಉಪಬಂಧಗಳನ್ನು ಉಲ್ಲಘಿಂಸುವ ಪ್ರಕರಣಗಳನ್ನು ಸಮುಚಿತ ಪ್ರಾಧಿಕಾರದ ಮುಂದೆ ತರುವುದು.

(ಎಫ್) (i) ಮಹಿಳಾ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕೆ

(ii) ಮಹಿಳೆಯರಿಗೆ ರಕ್ಷಣೆ ನೀಡಲು ಮತ್ತು ಸಮಾನತೆ ಹಾಗೂ ಅಬಿsವೃದ್ಧಿಯ ಉದ್ದೇಶವನ್ನು ಸಹ ಸಾಧಿಸಲು ಅಧಿನಿಯಮಿಸಲಾದ ಕಾನೂನುಗಳನ್ನು ಕಾರ್ಯಗತಗೊಳಿಸದಿರುವುದಕ್ಕೆ

(iii) ಮಹಿಳೆಯರ ತೊಂದರೆಗಳನ್ನು ನಿವಾರಿಸಲು ಮತ್ತು ಅವರಿಗೆ ಕಲ್ಯಾಣವನ್ನು ಸುನಿಶ್ಚಿತಗೊಳಿಸಲು ಮತ್ತು ಪರಿಹಾರವನ್ನು ಒದಗಿಸಲು ಉದ್ದೇಶಿಲಾಗಿರುವ ಕಾರ್ಯನೀತಿಯ ನಿರ್ಧಾರಗಳನ್ನು ಮಾರ್ಗದರ್ಶಕ ಸೂತ್ರಗಳನ್ನು ಅಥವಾ ಸೂಚನೆಗಳನ್ನು ಪಾಲಿಸದಿರುವುದಕ್ಕೆ;

ಸಂಬಂಧಪಟ್ಟ ದೂರುಗಳನ್ನು ಪರಿಶೀಲಿಸುವುದು ಮತ್ತು ಆ ವಿಷಯಗಳನ್ನು ತಾನೇ ಗಮನಿಸುವುದು ಮತ್ತು ಅಂತಹ ವಿಷಯಗಳಿಂದ ಉದ್ಭವವಾಗುವ ವಿವಾದಾಂಶಗಳನ್ನು ಯುಕ್ತ ಅಧಿಕಾರಿಗಳಿಗೆ ಒಪ್ಪಿಸುವುದು;

(ಜಿ) ಮಹಿಳೆಯರ ಬಗ್ಗೆ ತೋರುವ ತಾರತಮ್ಯದಿಂದ ಅಥವಾ ಅವರ ಮೇಲೆ ನಡೆಸಲಾಗುವ ದೌರ್ಜನ್ಯಗಳಿಂದ ಉದ್ಭಬಿಸುವ ನಿದಿರ್sಷ್ಟ ಸಮಸ್ಯೆಗಳು ಅಥವಾ ಪರಿಸ್ಥಿತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಲು ಅಥವಾ ವಿಚಾರಣೆ ನಡೆಸಲು ಕರೆ ನೀಡುವುದು ಮತ್ತು ನಿರ್ಬಂಧಗಳನ್ನು ಗುರುತಿಸಿ ಅವುಗಳ ನಿವಾರಣೆಗಾಗಿ ಮಾರ್ಗೋಪಾಯಗಳನ್ನು ಶಿಫಾರಸ್ಸು ಮಾಡುವುದು;

(ಹೆಚ್) ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಪ್ರಾತಿನಿಧ್ಯವು ಸೂಕ್ತವಾಗಿ ಆಗಿದೆಯೇ ಎನ್ನುವುದನ್ನು ಸುನಿಶ್ಚಿತಗೊಳಿಸುವ ಮಾರ್ಗಗಳನ್ನು ಸೂಚಿಸಲು ಸಾಧ್ಯವಾಗುವಂತೆ ಉತ್ತೇಜನಾತ್ಮಕ ಹಾಗೂ ಶೈಕ್ಷಣಿಕ ಸಂಶೋಛನೆಗಳನ್ನು ಕೈಗೊಳ್ಳುವುದು ಮತ್ತು ವಸತಿ ಮತ್ತು ಮೂಲಭೂತಸೇವೆಗಳಿಂದ ಪರಿಚಿತರಾಗಿರುವುದು, ಅತಿ ದುಡಿಮೆಯಿಂದಾಗುವ ಶ್ರಮವನ್ನು ಹಾಗೂ ವೃತ್ತಿ ಸಂಬಂಧವಾದ ಆರೋಗ್ಯದ ತೊಂದರೆಗಳನ್ನು ಕಡಿಮೆ ಮಾಡಲು ಅವರ ವೃತ್ತಿಪರ ಉತ್ಪಾದಕತೆಯನ್ನು ಹೆಚ್ಚಿಸಲು ಬೆಂಬಲ ಸೇವೆಗಳ ಹಾಗೂ ತಾಂತ್ರಿಕಜ್ಞಾನ ಸಾಕಷ್ಟಿಲ್ಲದಿರುವುದು ಮುಂತಾದ ಅವರ ಅಬಿsವೃದ್ಧಿಗೆ ಅಡ್ಡಿಯನ್ನುಂಟು ಮಾಡುವುದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸುವುದು.

(ಐ) ಮಹಿಳೆಯರನ್ನು ಖೈದಿಗಳಾಗಿ ಅಥವಾ ಇತರ ರೀತಿಯಲ್ಲಿ ಇಡಲಾದ ಬಂದೀಖಾನೆ, ರಕ್ಷಣಾಗೃಹ, ಮಹಿಳಾ ಸಂಸ್ಥೆಗಳು ಅಥವಾ ಅಬಿsರಕ್ಷೆಯ ಇತರ ಸ್ಥಳಗಳನ್ನು ಪರೀಕ್ಷಿಸುವುದು ಅಥವಾ ಪರೀಕ್ಷಿಸುವಂತೆ ಮಾಡುವುದು ಮತ್ತು ಅವಶ್ಯಕವೆಂದು ಕಂಡು ಬಂದಲ್ಲಿ ಪರಿಹಾರ ಕ್ರಮವನ್ನು ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಕೈಗೊಳ್ಳುವುದು.

(ಜೆ) ಅತ್ಯಧಿಕ ಸಂಖ್ಯೆಯ ಮಹಿಳೆಯರ ಮೇಲೆ ಪರಿಣಾಮವನ್ನುಂಟುಮಾಡುವ ವಿವಾದಾಂಶಗಳನ್ನು ಒಳಗೊಂಡಿರುವ ವ್ಯಾಜ್ಯಗಳಿಗೆ ಹಣಕಾಸು ನೆರವನ್ನು ಒದಗಿಸುವುದು;

(ಕ) ಮಹಿಳೆಯರ ಸಾಮಾಜಿಕ ಹಾಗೂ ರ್ಆಕ ಅಬಿsವೃದ್ಧಿಯ ಯೋಜನಾ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದು ಮತ್ತು ಆ ಬಗ್ಗೆ ಸಲಹೆ ನೀಡುವುದು:

(ಎಲ್) ರಾಜ್ಯದಲ್ಲಿನ ಮಹಿಳೆಯರ ಅಬಿsವೃದ್ಧಿಯ ಪ್ರಗತಿಯನ್ನು ಮೌಲ್ಯ ಮಾಪನ ಮಾಡುವುದು;

(ಎಂ) ಮಹಿಳೆಯರಿಗೆ ಸಂಬಂಧಪಟ್ಟ ಯಾವುದೇ ವಿಷಯ ಮತ್ತು ನಿರ್ದಿಷ್ಟವಾಗಿ ಮಹಿಳೆಯರು ಅನುಭವಿಸುವಂಥ ವಿವಿಧ ತೊಂದರೆಗಳ ಬಗ್ಗೆ ಸರ್ಕಾರಕ್ಕೆ ನಿಯತಕಾಲಿಕವಾಗಿ ವರದಿ ಮಾಡುವುದು;

(ಎನ್) ತನ್ನ ಪ್ರಕಾರ್ಯಗಳ ನಿರ್ವಹಣೆಯಲ್ಲಿ ಸರ್ಕಾರಿ ಇಲಾಖೆಗಳು ಹಾಗೂ ಅದರ ಏಜೆನ್ಸಿಗಳೊಂದಿಗಷ್ಟೆ ಅಲ್ಲದೆ ರಾಜ್ಯದಲ್ಲಿನ ಸ್ವಯಂ ಸೇವಾ ಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ಮಹಿಳಾ ಸಂಸ್ಥೆಗಳೊಂದಿಗೆ ಸಹ ತೊಡಗಿಸಿಕೊಳ್ಳುವುದು.

(ಓ) ಕೌಟುಂಬಿಕ ನ್ಯಾಯಾಲಯಗಳ ಮುಂದೆ ಇರುವ ಮಹಿಳೆಯರ ವೈವಾಹಿಕ ವಿವಾದಗಳನ್ನು ಕುರಿತಂತೆ ಸಮಾನವಾಗಿ ಹಾಗೂ ನಿಷ್ಟಕ್ಷಪಾತವಾಗಿ ನ್ಯಾಯವನ್ನು ಸುನಿಶ್ಚಿತಗೊಳಿಸಲು ಮಹಿಳೆಯರಿಗೆ ನೆರವು ನೀಡುವುದು;

(ಪಿ) ಸರ್ಕಾರವು ಅದಕ್ಕೆ ಉಲ್ಲೇಖಿಸಬಹುದಾದ ಅಂಥ ಇತರ ವಿಷಯಗಳು:

ಪರಂತು (1ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ವಿಷಯವನ್ನು ರಾಷ್ಟ್ರೀಯ ಮಹಿಳಾ ಆಯೋಗ ಅಧಿನಿಯಮ, 1990ರ (1990ರ ಕೇಂದ್ರ ಅಧಿನಿಯಮ 20) 3ನೇ ಪ್ರಕರಣದಡಿ ರಚಿತವಾದ ರಾಷ್ಟ್ರೀಯ ಮಹಿಳಾ ಆಯೋಗವು ತೆಗೆದುಕೊಂಡಿದ್ದರೆ, ರಾಜ್ಯ ಮಹಿಳಾ ಆಯೋಗವು ಅಂಥ ವಿಷಯಗಳ್ಲಿ ಅಧಿಕಾರ ವ್ಯಾಪ್ತಿ ಹೊಂದಿರುವುದು ನಿಂತು ಹೋಗತಕ್ಕದ್ದು.

(2)(1)ನೇ ಉಪ-ಪ್ರಕರಣದ (ಇ) ಖಂಡದಲ್ಲಿ ಉಲ್ಲೇಖಿಸಲಾದ ಪ್ರಾಧಿಕಾರಗಳು ಆಯೋಗವು ನೀಡಿದ ಸೂಚನೆಗಳು ಅಥವಾ ಶಿಫಾರಸ್ಸುಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ತಪ್ಪಿದರೆ, ಅದನ್ನು ಸರ್ಕಾರಕ್ಕೆ ವರದಿ ಮಾಡತಕ್ಕದ್ದು, ಅದು ಆ ಬಗ್ಗೆ ಅವಶ್ಯಕ ಕ್ರಮ ತೆಗೆದುಕೊಳ್ಳತಕ್ಕದ್ದು.

(3) ಸರ್ಕಾರವು ಆಯೋಗದ ಶಿಫಾರಸ್ಸುಗಳನ್ನು, ಶಿಫಾರಸುಗಳ ಬಗ್ಗೆ ಕೈಗೊಂಡ ಅಥವಾ ಕೈಗೊಳ್ಳಲು ಉದ್ದೇಶಿಸಿದ ಕ್ರಮವನ್ನು ವಿವರಿಸುವ ಹಾಗೂ ಅಂಥ ಯಾವುದೇ ಶಿಫಾರಸುಗಳನ್ನು ಅಂಗೀಕರಿಸದೆ ಇರುವುದಕ್ಕೆ ಕಾರಣಗಳು ಯಾವುದಾದರೂ ಇದ್ದರೆ ಅವುಗಳನ್ನು ವಿವರಿಸುವ ಜ್ಞಾಪನ ಪತ್ರದೊಂದಿಗೆ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮುಂದೆ ಮಂಡಿಸುವಂತೆ ಮಾಡತಕ್ಕದ್ದು.

ಇತ್ತೀಚಿನ ನವೀಕರಣ​ : 11-02-2021 04:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಮಹಿಳಾ ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080