ಅಭಿಪ್ರಾಯ / ಸಲಹೆಗಳು

ಆಯೋಗದ ರಚನೆ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ಅಧಿಸೂಚನೆ :-

ಸಂಖ್ಯೆ:ಲಾ 55 ಎಲ್ ಜಿ ಎನ್ 94, ಬೆಂಗಳೂರು, ದಿನಾಂಕ : 26ನೇ ಮೇ 1995

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ, 1995ಕ್ಕೆ 1995 ಮೇ 24ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಅದನ್ನು 1995ರ ಕರ್ನಾಟಕ ಅಧಿನಿಯಮ ಸಂಖ್ಯೆ:17 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

1995ರ ಕರ್ನಾಟಕ ಅಧಿನಿಯಮ ಸಂಖ್ಯೆ 17

(1995ರ-ಮೇ 26ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಕೆಯಲ್ಲಿ ಮೊದಲು ಪ್ರಕಟವಾಗಿದೆ)
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995
(1995ರ-ಮೇ ಇಪ್ಪತ್ತನಾಲ್ಕನೇ ದಿನಾಂಕದಂದು ರಾಜ್ಯಪಾಲರ ಅನುಮತಿಯನ್ನು ಪಡೆಯಲಾಗಿದೆ)

ಮಹಿಳೆಯರಿಗಾಗಿ ಒಂದು ರಾಜ್ಯ ಆಯೋಗವನ್ನು ರಚಿಸಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಅನುಷಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸಲು ಒಂದು ಅಧಿನಿಯಮ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಮಹಿಳೆಯರಿಗಾಗಿ ಒಂದು ರಾಜ್ಯ ಆಯೋಗವನ್ನು ರಚಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಅತವಾ ಅದಕ್ಕೆ ಅನುಷಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ:

ಇದು ಭಾರತ ಗಣರಾಜ್ಯದ ನಲವತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅದಿನಿಯಮಿತವಾಗಿರಲಿ:-

1. ಸಂಕ್ಷಿಪ್ತ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ

 1. ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995 ಎಂದು ಕರೆಯತಕ್ಕದ್ದು.
 2. ಇದು ಇಡೀ ಕರ್ನಾಟಕ ರಾಜ್ಯಕ್ಕೆ ಅನ್ವಯವಾಗತಕ್ಕದ್ದು.
 3. ಇದು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಿಂದ ಜಾರಿಯಲ್ಲಿ ಬರತಕ್ಕದ್ದು.

2. ಪರಭಾಷೆಗಳು : ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು

 1. ಆಯೋಗ - ಎಂದರೆ 3ನೇ ಪ್ರಕರಣದ ಅಡಿ ರಚಿಸಲಾದ ಕರ್ನಾಟಕ ರಾಜ್ಯ ಮಹಿಳಾ ಆಯೋಗ
 2. ಸರ್ಕಾರ ಎಂದರೆ ಕರ್ನಾಟಕ ಸರ್ಕಾರ
 3. ಸದಸ್ಯ ಎಂದರೆ ಆಯೋಗದ ಒಬ್ಬ ಸದಸ್ಯ

 

3. ಆಯೋಗದ ರಚನೆ:

 1. ಅಧಿನಿಯಮದ ಪ್ರಾರಂಭದ ತರುವಾಯ ಆದಷ್ಟು ಬೇಗನೆ, ಸರ್ಕಾರವು, ಈ ಅಧಿನಿಯಮದ ಮೂಲಕ ಅಥವಾ ಅದರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಲು ಮತ್ತು ವಹಿಸಲಾದ ಪ್ರಕಾರ್ಯಗಳನ್ನು ನೆರವೇರಿಸಲು, ಬೆಂಗಳೂರಿನಲ್ಲಿ ಕೇಂದ್ರಸ್ಥಾನವನ್ನು ಹೊಂದಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಎಂದು ಕರೆಯಲಾಗುವ ಒಂದು ನಿಕಾಯವನ್ನು ರಚಿಸತಕ್ಕದ್ದು.
 2. ಆಯೋಗವು ಈ ಮುಂದಿನ ಸದಸ್ಯರನ್ನು ಒಳಗೊಂಡಿರತಕ್ಕದ್ದು ಎಂದರೆ :
  1. ಮಹಿಳಾ ಹಿತರಕ್ಷಣೆಗಾಗಿ ತಮ್ಮನ್ನು ಮುಡುಪಿಟ್ಟಕೊಂಡಿರುವ ಸರ್ಕಾರದಿಂದ ನಾಮ ನಿರ್ದೇಶಿತರಾಗತಕ್ಕ ಒಬ್ಬ ಮಹಿಳಾ ಅಧ್ಯಕ್ಷರು.
  2. ಕಾನೂನು ಅಥವಾ ಶಾಸನರಚನೆ, ಕಾರ್ಮಿಕ ಸಂಘವಾದ, ಮಹಿಳೆಯರ ಉದ್ಯೋಗ ಸಾಮಥರ್ಯ್‌ವನ್ನು ಹೆಚ್ಚಿಸುವುದಕ್ಕೆ ಇರುವಂತೆ ಕೈಗಾರಿಕೆ ಅಥವಾ ಸಂಸ್ಥೆಯ ನಿರ್ವಹಣೆ, (ಮಹಿಳಾ ಕಾರ್ಯಕರ್ತರೂ ಸೇರಿದಂತೆ ಮಹಿಳಾ ಸ್ವಯಂ ಸೇವಾ ಸಂಸ್ಥೆಗಳ ಆಡಳಿತ, ರ್ಆಕ, ಅಬಿsವೃದ್ಧಿ, ಆರೋಗ್ಯ, ಶಿಕ್ಷಣ ಅಥವಾ ಸಮಾಜ ಕಲ್ಯಾಣದಲ್ಲಿ ಅನುಭವವುಳ್ಳ ಸಮರ್ಥ, ಪ್ರಾಮಾಣಿಕ ಮತ್ತು ಗಣ್ಯವ್ಯಕ್ತಿಗಳ ಪೈಕಿ ಸರ್ಕಾರವು ನಾಮ ನಿರ್ದೇಶಿಸತಕ್ಕ ಆರು ಜನ ಸದಸ್ಯರು.

   ಪರಂತು, ಕಡೇ ಪಕ್ಷ ಕ್ರಮವಾಗಿ ಅನುಸೂಚಿತ ಜಾತಿಗಳಿಗೆ ಸೇರಿದ ಒಬ್ಬ ಸದಸ್ಯ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ಒಬ್ಬ ಸದಸ್ಯನಿರತಕ್ಕದ್ದು. ಮತ್ತು ಪರಂತು ಈ ಖಂಡದಡಿ ನಾಮ ನಿರ್ದೇಶಿತರಾಗತಕ್ಕ ಬಹುತೇಕ ಸದಸ್ಯರು ಮಹಿಳೆಯ ರಾಗಿರತಕ್ಕದ್ದು.

  3. ಮಹಿಳಾ ಮತ್ತು ಮಕ್ಕಳ ಅಬಿsವೃದ್ಧಿ ಇಲಾಖೆಯ ಪ್ರಭಾರದಲ್ಲಿರುವ ಸರ್ಕಾರದ ಕಾರ್ಯದರ್ಶಿ, ಪದನಿಮಿತ್ತ ಸದಸ್ಯ.
  4. ಮಹಿಳಾ ಮತ್ತು ಮಕ್ಕಳ ಅಬಿsವೃದ್ಧಿ ಇಲಾಖೆಯ ನಿರ್ದೇಶಕರು, ಪದನಿಮಿತ್ತ ಸದಸ್ಯ.
  5. ಡೈರೆಕ್ಟರ್ ಜನರಲ್ ಆಫ್ ಪೋಲೀಸ್ ಅಥವಾ ಅವರು ನಾಮ ನಿರ್ದೇಶಿಸಿದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ರವರ ದರ್ಜೆಗೆ ಕಡಿಮೆಯಿಲ್ಲದ ಹುದ್ದೆಯ ಅಧಿಕಾರಿ, ಮಹಿಳೆಗೆ ಇದರಲ್ಲಿ ಆದ್ಯತೆ ನೀಡುವುದು, ಪದನಿಮಿತ್ತ ಸದಸ್ಯ.

   (ಎಫ್) ಆಯೋಗದ ಕಾರ್ಯದರ್ಶಿಯು ಸದಸ್ಯ - ಕಾರ್ಯದರ್ಶಿಯಾಗಿರತಕ್ಕದ್ದು.

 

ಆಯೋಗದ ರಚನೆ ಮತ್ತು ಪ್ರಕಾರ್ಯಗಳು

ಇತ್ತೀಚಿನ ನವೀಕರಣ​ : 11-02-2021 04:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಮಹಿಳಾ ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080